ರೈತರಿಗೆ ಸಿಹಿ ಸುದ್ದಿ! 2 ಲಕ್ಷ ಬಡ್ಡಿ ರಹಿತ ಸಾಲ ಪಡೆಯಲು ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

Spread the love

ನಮಸ್ಕಾರ ಸೇಹಿತರೇ, RBI ರೈತರಿಗೆ ಕೃಷಿ ಸಾಲ ವಿತರಣೆಗೆ ಸಂಬಂಧಿಸಿದಂತೆ ಸಿಹಿ ಸುದ್ದಿ ನೀಡಿದೆ. ಈ ಹಿಂದೆ ಇದ್ದ ಕೃಷಿ ಸಾಲದ ಮಿತಿಯನ್ನು ಹೆಚ್ಚಳ ಮಾಡಿ ನೂತನ ಆದೇಶವನ್ನು ಹೊರಡಿಸಿದೆ.

agriculture loan

ಕೃಷಿ ಭೂಮಿಯಲ್ಲಿ ಹೊಸ ಬೆಳೆಯನ್ನು ಬೆಳೆಯಲು ಮತ್ತು ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಅರ್ಥಿಕವಾಗಿ ನೆರವು ನೀಡಲು ರಾಷ್ಟ್ರ‍ಿಕೃತ ಬ್ಯಾಂಕ್ಗಳ ಮೂಲಕ ಕೃಷಿ ಸಾಲವನ್ನು ರೈತರು ಪಡೆಯಲು ಅವಕಾಶವಿದ್ದು ಯಾವುದೇ ಅಡಮಾನವಿಲ್ಲದೆಯು ಬ್ಯಾಂಕ್ ಮೂಲಕ ನೀಡುವ ಸಾಲದ ಮಿತಿಯನ್ನು RBI ನಿಂದ ಏರಿಕೆ ಮಾಡಲಾಗಿದೆ.

RBI ಸಾಲದ ಮಿತಿ ₹2 ಲಕ್ಷಕ್ಕೆ ಏರಿಕೆ ಮಾಡಲಾಗಿದೆ:

RBI ರಾಷ್ಟ್ರ‍ಿಕೃತ ಬ್ಯಾಂಕ್ ಮೂಲಕ ರೈತರು ಪಡೆಯಬಹುದಾದ ಅಡಮಾನ ರಹಿತ ಕೃಷಿ ಸಾಲದ ಮಿತಿಯನ್ನು ₹1.6 ರಿಂದ ₹2 ಲಕ್ಷಕ್ಕೆ ಏರಿಕೆ ಮಾಡಿ ನೂತನ ಆದೇಶವನ್ನು ಹೊರಡಿಸಲಾಗಿದೆ.

ಜಾರಿಗೆ ಬರುವ ದಿನಾಂಕ

ಪರಿಷ್ಕೃತ ಆದಾರ ರಹಿತ ಕೃಷಿ ಸಾಲ ಮಿತಿ 01 ಜನವರಿ 2025 ರ ನಂತರದಲ್ಲಿ ಜಾರಿಗೆ ಬರಲಿದ್ದು ಈ ಕ್ರಮದಿಂದ ದೇಶದ ಲಕ್ಷಾಂತರ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ರೈತರು ಪರಿಷ್ಕೃತ ಅಡಮಾನ ರಹಿತ ಸಾಲದ ಮಿತಿ ಹೆಚ್ಚಳದ ಪ್ರಯೋಜನವನ್ನು 01 ಜನವರಿ 2025 ರ ನಂತರ ಪಡೆಯಬಹುದಾಗಿದೆ.

ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ RBI ಆಧಾರ ರಹಿತ ಕೃಷಿ ಸಾಲದ ಮಿತಿಯನ್ನು ₹1.6 ಲಕ್ಷದಿಂದ ₹ 2 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ಸಾಲದ ಮಿತಿ 01 ಜನವರಿ 2025 ರಿಂದ ಜಾರಿಗೆ ಬರಲಿದ್ದು, ದೇಶಾದ್ಯಂತ ರೈತರಿಗೆ ಪ್ರಯೋಜನ ಆಗಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

RBI ಸಾಲದ ಮಿತಿ ಹೆಚ್ಚಳ ಮಾಡಿರುವ ಕ್ರಮದಿಂದಾಗಿ ಕೃಷಿ ವಲಯವನ್ನು ಬಲಪಡಿಸುವುದಲ್ಲದೆ ಗ್ರಾಮೀಣ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಎಂದು ಕೇಂದ್ರ ಕೃಷಿ ಸಚಿವಾಲಯದಿಂದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಬಡ್ಡಿದರಕ್ಕೆ ಸಬ್ಸಿಡಿ:

ರೈತರು ತಾವು ತೆಗೆದುಕೊಂಡಿರುವ ಕೃಷಿ ಸಾಲವನ್ನು ಬ್ಯಾಂಕ್ ಶಾಖೆಯಲ್ಲಿ ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಿದರೆ ಒಟ್ಟು ಬಡ್ಡಿದರಕ್ಕೆ ಶೇ 3-4% ಬಡ್ಡಿ ಸಹಾಯಧನ ಸಿಗುತ್ತದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ಕೃಷಿ ಸಾಲವನ್ನು ಪಡೆಯಲು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ರಾಷ್ಟ್ರ‍ಿಕೃತ ಬ್ಯಾಂಕ್ ಶಾಖೆಯನ್ನು ನೇರವಾಗಿ ಭೇಟಿ ಮಾಡಿ ಕೃಷಿ ಸಾಲವನ್ನು ಪಡೆಯಬಹುದು.

ಸೂಕ್ತ ಸಲಹೆ

ಜಮೀನಿನ ಪಹಣಿಯ ಋಣಗಳು ಕಾಲಂ ನಲ್ಲಿ ಆ ಜಮೀನಿನ ಮೇಲೆ ಯಾವೆಲ್ಲ ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆಯಲಾಗಿದೆ? ಎಷ್ಟು ಸಾಲ ಪಡೆಯಲಾಗಿದೆ ಎಂದು ನಮೂದಿಸಿರುತ್ತಾರೆ ಇದೆ ಪಹಣಿಯನ್ನು ತೆಗೆದುಕೊಂಡು ಬೇರೆ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಲು ಬರುವುದಿಲ್ಲ ಅದ್ದರಿಂದ ಬೇರೆ ಪಹಣಿಯನ್ನು ಸಲ್ಲಿಸಬೇಕು / ಇತರೆ ಬ್ಯಾಂಕ್ ನಲ್ಲಿರುವ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮರು ಪಾವತಿ ಮಾಡಿರಬೇಕು.

ರೈತರು ಕೃಷಿ ಸಾಲವನ್ನು ಪಡೆಯಲು ಬ್ಯಾಂಕ್ ಶಾಖೆಯನ್ನು ಭೇಟಿ ಮಾಡುವ ಮುನ್ನ ನಿಮ್ಮ ಜಮೀನಿನ ಪಹಣಿ/RTC ಅಲ್ಲಿ “ಋಣಗಳು” ಕಾಲಂ ನಲ್ಲಿರುವ ಸಾಲದ ವಿವರಗಳನ್ನು ಪರೀಶಿಲಿಸಿ ನಂತರ ಆ ದಾಖಲೆಯನ್ನು ಸಲ್ಲಿಸಬೇಕು ಕೆಲವೊಂದು ಪ್ರಕರಣಗಳಲ್ಲಿ ಸಾಲ ಮರುಪಾವತಿ ಮಾಡಿದ್ದರು ಪಹಣಿಯ “ಋಣಗಳು” ಕಾಲಂ ನಲ್ಲಿ ಸಾಲದ ಮೊತ್ತ ಹಾಗೆಯೇ ಇರುತ್ತದೆ ಇಂತಹ ಸಮಯದಲ್ಲಿ ನೀವು ಸಾಲ ತೆಗೆದುಕೊಂಡಿರುವ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ “NOC” ಪ್ರಮಾಣ ಪತ್ರವನ್ನು ಪಡೆದು ನಿಮ್ಮ ಹೋಬಳಿಯ ನಾಡಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಈ ಸಾಲದ ಮೊತ್ತವನ್ನು ವಜಾ ಮಾಡಿಕೊಳ್ಳಬಹುದು.

ಇತರೆ ವಿಷಯಗಳು:

Author

Leave a Comment

rtgh