ನಮಸ್ಕಾರಸೇಹಿತರೇ ,ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯದ ಜನತೆಗೆ ಹೊಸ ರೇಷನ್ ಕಾರ್ಡ್ ಪಡೆಯಲು ಸಿಹಿ ಸುದ್ದಿ ನೀಡಿದೆ. ಹೊಸ ರೇಷನ್ ಕಾರ್ಡ್ ಅರ್ಜಿಯ ಪ್ರಕ್ರಿಯೆ ನಾಳೆಯಿಂದ ಪ್ರಾರಂಭವಾಗುತ್ತಿದ್ದು, ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಹೊಸ ರೇಷನ್ ಕಾರ್ಡ್ ಪಡೆಯಲು ಅಗತ್ಯ ಅರ್ಹತೆಗಳು:
- ಕರ್ನಾಟಕದ ನಿವಾಸಿ ಆಗಿರಬೇಕು.
- ಕುಟುಂಬದಲ್ಲಿ ರೇಷನ್ ಕಾರ್ಡ್ ಇಲ್ಲದಿದ್ದರೆ ಮಾತ್ರ ಹೊಸ ಅರ್ಜಿ ಸಲ್ಲಿಸಬಹುದು.
- ಮದುವೆಯಾದ ದಂಪತಿಗಳು ಹೊಸ ಕಾರ್ಡ್‌ಗೆ ಅರ್ಜಿ ಹಾಕಬಹುದಾಗಿದೆ.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಆಹಾರ ಇಲಾಖೆಯ ನಿಯಮಗಳ ಪ್ರಕಾರ ಇರಬೇಕು.
ಅರ್ಜಿಯನ್ನು ಸಲ್ಲಿಸಲು ಕಡ್ಡಾಯ ಈ ದಾಖಲೆಗಳು:
- ಆಧಾರ್ ಕಾರ್ಡ್.
- ಮೊಬೈಲ್ ಸಂಖ್ಯೆ.
- ವೋಟರ್ ಐಡಿ ಕಾರ್ಡ್.
- ಡ್ರೈವಿಂಗ್ ಲೈಸೆನ್ಸ್ (ಇದ್ದಲ್ಲಿ ಮಾತ್ರ).
- ಜನನ ಪ್ರಮಾಣ ಪತ್ರ (ಮಕ್ಕಳಿಗೆ).
- ಫೋಟೋ.
- ವಯಸ್ಸಿನ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
ಅರ್ಜಿಯನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬಹುದು?
- ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶೀಘ್ರದಲ್ಲಿಯೇ ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ.
- ಅರ್ಹತೆಗಳಿಗೆ ಅನುಸಾರವಾಗಿಯೇ ಅರ್ಜಿಗಳನ್ನು ಪರಿಶೀಲನೆ ಮಾಡಿ ಮಂಜೂರು ಮಾಡಲಾಗುತ್ತದೆ.
- ತಾವು ಪೂರಕ ದಾಖಲೆಗಳೊಂದಿಗೆ ಆನ್‌ಲೈನ್ ಅಥವಾ ಆಹಾರ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
ರೇಷನ್ ಕಾರ್ಡ್‌ನ ಪ್ರಾಮುಖ್ಯತೆ:
ರೇಷನ್ ಕಾರ್ಡ್ ಕೇವಲ ಉಚಿತ ಆಹಾರ ಧಾನ್ಯ ಪಡೆಯಲು ಮಾತ್ರವಲ್ಲ, ಗೃಹಲಕ್ಷ್ಮಿ ಯೋಜನೆ ಜೊತೆಗೆ ಇತರ ಸರಕಾರಿ ಯೋಜನೆಗಳಿಗೆ ನೋಂದಾಯಿಸಿಕೊಳ್ಳಲು ಅತ್ಯಂತ ಮುಖ್ಯವಾಗಿದೆ. ಆದ್ದರಿಂದ ತಕ್ಷಣವೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ.
ಮಹತ್ವದ ಮಾಹಿತಿ:
ಅರ್ಜಿ ಪ್ರಕ್ರಿಯೆಯ ಆಧಿಕೃತ ದಿನಾಂಕ, ಸ್ಥಳ ಹಾಗು ಮಾಹಿತಿಯನ್ನು ಶೀಘ್ರದಲ್ಲೆ ತಿಳಿಸಲಾಗುವುದು ತಪ್ಪದೆ ಈ ಮೇಲ್ಕಂಡ ಎಲ್ಲ ದಾಖಲೆಗನ್ನು ಹೊಂದಿಸಿಕೊಳ್ಳಿ ಹಾಗು ಈ ಮಾಹಿತಿಯನ್ನು ನಿಮ್ಮ ಸೇಹಿತರಿಗೂ ಹಾಗು ಕುಟುಂಬದ ಸದಸ್ಯರಿಗೂ ಶೇರ್ ಮಾಡಿ ಲೇಖನವು ಕೊನೆವರೆಗೂ ಸಂಪೂರ್ಣವಾಗಿ ಓದಿದಕ್ಕೆ ಧನ್ಯವಾದಗಳು.