ಹಲೋ ಸ್ನೇಹಿತರೇ, ಸದ್ಯ ATMಗಳಿಂದ ಹಣ ಹಿಂಪಡೆಯುವುದು ಒಂದು ರೀತಿ ರಿಸ್ಕ್ ಕೂಡ ಹೌದು. ಕೆಲವೊಮ್ಮೆ ATMಗಳಿಂದ ಹಣ ವಿತ್ ಡ್ರಾ ಮಾಡಿದ ಸ್ವಲ್ಪಹೊತ್ತಿಗೆ ಅಥವಾ ದಿನದ ಕೊನೆಗೆ ಅಕೌಂಟ್ ಹ್ಯಾಕ್ ಆಗಿರುತ್ತದೆ. ಬಳಿಕ ಕ್ಷಣ ಮಾತ್ರದಲ್ಲಿ ಖಾತೆಯಲ್ಲಿನ ಸಂಪೂರ್ಣ ಹಣವನ್ನು ಲಪಟಾಯಿಸಲಾಗಿರುತ್ತದೆ. RBI ಈಗ ATMಗೆ ಸಂಬಂಧಿಸಿದಂತೆ ಕೆಲ ನಿರ್ಬಂಧಗಳನ್ನು ಏರುತ್ತಿದೆ. ಯಾವು ಆ ನಿರ್ಬಂಧಗಳು ಎಂಬುದನ್ನು ಇಲ್ಲಿ ತಿಳಿಯಿರಿ.

ATM ನಿಯಮದಲ್ಲಿ ಬದಲಾವಣೆ
ಬ್ಯಾಂಕ್ ಗೆ ಹೋಗದೆ ಇದ್ರೂ ಹೇಗೋ ಮ್ಯಾನೇಜ್ ಮಾಡಬಹುದು, ಆದರೆ, ಎಟಿಎಂ ಇಲ್ಲದೆ ಇದ್ರೆ ವ್ಯಾಪಾರ-ವ್ಯವಹಾರ ಮಾಡೋದು ಬಹಳ ಕಷ್ಟ. ಹಾಗಾಗಿ ATM ವಿಷಯದಲ್ಲಿ ಆಗುವ ಪ್ರತಿ ಬೆಳವಣಿಗೆ-ಬದಲಾವಣೆಯನ್ನು ತಿಳಿದುಕೊಳ್ಳಲೇಬೇಕು. ATM ನಿಯಮದಲ್ಲಿ ಕೆಲವು ಮಹತ್ವದ ಬದಲಾವಣೆ ಆಗುತ್ತಿದೆ ಇನ್ನು ಮುಂದೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕೆಲ ನಿರ್ಬಂಧಗಳನ್ನು ಏರುತ್ತಿದೆ.
ಅಕೌಂಟ್ ಹ್ಯಾಕ್
ಸದ್ಯ ATMಗಳಿಂದ ಹಣ ಹಿಂಪಡೆಯುವುದು ಒಂದು ರೀತಿ ರಿಸ್ಕ್ ಕೂಡ ಹೌದು. ಕೆಲವೊಮ್ಮೆ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಿದ ಸ್ವಲ್ಪಹೊತ್ತಿಗೆ ಅಥವಾ ದಿನದ ಕೊನೆಗೆ ಅಕೌಂಟ್ ಹ್ಯಾಕ್ ಆಗಿರುತ್ತದೆ. ಬಳಿಕ ಕ್ಷಣ ಮಾತ್ರದಲ್ಲಿ ಖಾತೆಯಲ್ಲಿನ ಸಂಪೂರ್ಣ ಹಣವನ್ನು ಕಳ್ಳತನ ಮಾಡಲಾಗುತ್ತಿದೆ. ಈ ರೀತಿಯ ಅಕ್ರಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ATM ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ.
ಇನ್ನೊಂದು ಸಮಸ್ಯೆ ಏನೆಂದರೆ ಎಟಿಎಂಗಳಿಂದ ಹಣ ತೆಗೆಯುವಾಗ ಕೆಲವರು ಪ್ರೊಸಸ್ ತಡ ಆಗುವುದನ್ನು ಹಣ ಬರುತ್ತಿಲ್ಲ ಎಂದು ತಿಳಿದು ಹೊರಟುಹೋಗುತ್ತಾರೆ. ಹಣ ತಡವಾಗಿ ಹೊರಬಂದು ಬೇರೆಯವರ ಅಥವಾ ವಂಚಕರ ಕೈಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಟಿಎಂನಿಂದ ಗ್ರಾಹಕರು 30 ಸೆಕೆಂಡುಗಳಲ್ಲಿ ಹಣವನ್ನು ತೆಗೆದುಕೊಳ್ಳದಿದ್ದರೆ ನಂತರ ಅದು ಸ್ವಯಂಚಾಲಿತವಾಗಿ ಮತ್ತೆ ಎಟಿಎಂ ಮಷಿನ್ ಒಳಗೆ ಹೋಗುವಂತಹ ನಿಯಮವನ್ನು ಮಾಡಲಾಗಿದೆ.
30 ಸೆಕೆಂಡುಗಳಲ್ಲಿ ನೀವು ತೆಗೆದುಕೊಳ್ಳದೇ ಇದ್ದ ಹಣ ಮರಳಿ ಎಟಿಎಂ ಮಷಿನ್ ಗೆ ಹೋಗುವುದಷ್ಟೇಯಲ್ಲ, ತ್ವರಿತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಕೂಡ ಆಗುತ್ತದೆ. ಈ ಹೊಸ ನಿಯಮದಿಂದಾಗಿ ಗ್ರಾಹಕರು ಮರೆತದ್ದರಿಂದ ಬೇರೆಯವರ ಪಾಲಾಗುತ್ತಿದ್ದ ಹಣ ಈಗ ಸುರಕ್ಷಿತವಾಗಿ ಗ್ರಾಹಕರ ಖಾತೆಗೆ ಹೋಗುವಂತಾಗಿದೆ.
ಇತರೆ ವಿಷಯಗಳು
ಪಡಿತರ ಚೀಟಿದಾರರಿಗೆ ಇನ್ಮುಂದೆ ಸಿಗಲಿದೆ ʼಡಿಜಿಟಲ್ ರೇಷನ್ ಕಾರ್ಡ್ʼ..!