ನಮಸ್ಕಾರ ಸೇಹಿತರೇ, ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಉಚಿತ ಸ್ಕೂಟಿ ಯೋಜನೆಯಡಿ ಸಬ್ಸಿಡಿಯಲ್ಲಿ ಹೆಣ್ಣು ಮಕ್ಕಳಿಗೆ ಸ್ಕೂಟಿಯನ್ನು ನೀಡಲಾಗುತ್ತಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ಕುರಿತು ಕೇಂದ್ರದ ವಾರ್ತಾ ಇಲಾಖೆಯಿಂದ ಅಧಿಕೃತವಾಗಿ ಬಿಡುಗಡೆ ಮಾಡಿರುವ ಪ್ರಕಟಣೆ ಏನು ನಿಡಲಾಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.

ಇಂದಿನ ಡಿಜಿಟಲ್ ಯುಗದಲ್ಲಿ ಅಸಲಿ ಸುದ್ದಿಗಿಂತಲು ಬಹು ಬೇಗ ನಕಲಿ ಸುದ್ದಿ ದೇಶದಾದ್ಯಂತ ಶೀಘ್ರದಲ್ಲೇ ಹರಡುತ್ತದೆ. ಕೆಲವು ದಿನಗಳಿಂದ ಹಿಂದಿ ಭಾಷೆಯ ಕೆಲವು digital website/youtube ಮಾಧ್ಯಮದಲ್ಲಿ ಕೇಂದ್ರ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ಸಬ್ಸಿಡಿಯಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಸ್ಕೂಟಿಯನ್ನು ನೀಡಲು ಯೋಜನೆಯನ್ನು ಜಾರಿಗೆ ತರಲಾಗಿದೆ ಅರ್ಜಿ ಸಲ್ಲಿಸಲು ಈ ವಿಧಾನವನ್ನು ಅನುಸರಿಸಿ ಎಂದು ಲಿಂಕ್ ಗಳನ್ನು ನೀಡಲಾಗಿತ್ತು.
ಕೇಂದ್ರದಿಂದ ಹೆಣ್ಣು ಮಕ್ಕಳಿಗೆ ಸ್ಕೂಟಿ ಯೋಜನೆ
ಅನೇಕ ಡಿಜಿಟಲ್ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಕೇಂದ್ರದ ವಾರ್ತಾ ಇಲಾಖೆಯಿಂದ ಅಧಿಕೃತ ಮಾಹಿತಿಯನ್ನು ತನ್ನ ಟ್ವಿಟರ್(X) ಖಾತೆಯಲ್ಲಿ ಹಂಚಿಕೊಂಡಿದ್ದು ಈ ರೀತಿಯ ಯಾವುದೇ ಯೋಜನೆಯನ್ನು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡಿರುವುದಿಲ್ಲ ಎಂದು ತಿಳಿಸಿದ್ದು ಅರ್ಜಿ ಸಲ್ಲಿಸಲು ಯಾವುದೇ ಬಗ್ಗೆಯ ಲಿಂಕ್ ಮೇಲೆ ಕ್ಲಿಕ್ ಮಾಡದೇ ಇರಲು ಸಾರ್ವಜನಿಕರಿಗೆ ಸೂಚನೆ ನೀಡಲಾಗಿರುತ್ತದೆ.
ವಾರ್ತಾ ಇಲಾಖೆಯ ಮಾಹಿತಿ: ವೈರಲ್ ಸುದ್ದಿ
ಸಾರ್ವಜನಿಕರು ಗೂಗಲ್ ಸರ್ಚ್ ನಲ್ಲಿ free scooty yojana ಎಂದು ಸರ್ಚ್ ಮಾಡಿದರೆ ಅನೇಕ ವೆಬ್ಸೈಟ್ ರಚನಾಕರರು ಈ ಯೋಜನೆಯ ಕುರಿತು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಸ್ಪಷ್ಟನೆಯನ್ನು ಕೇಂದ್ರ ಸರ್ಕಾರದ ವಾರ್ತಾ ಇಲಾಖೆಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುಳ್ಳು ಸುದ್ದಿ
ಪ್ರತಿ ವರ್ಷವು ಸಹ ಅನೇಕ ನಕಲಿ/ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಇದನ್ನು ಸೃಷ್ಟಿ ಮಾಡಿ ಹರಿಬಿಡುವುದರ ಹಿಂದಿನ ಕಾರಣವಾದರು ಏನು ಎಂಬುದನ್ನು ತಿಳಿಯೋಣ ಸೈಬರ್ ತಜ್ಞ, ಸೈಬರ್ ಅಪರಾಧ & ಸೈಬರ್ ಕಾನೂನಿನ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಅನುಜ್ ಅಗರ್ವಾಲ್ ಈ ಕುರಿತು ಹೀಗೆ ತಿಳಿಸಿದ್ದಾರೆ ವೆಬ್ಸೈಟ್ ನಲ್ಲಿ ಕ್ಲಿಕ್‌ಬೈಟ್ ಲಿಂಕ್ ರಚಿಸಿ ಬಳಕೆದಾರರು ಈ ಮೂಲಕ ವೀವ್ಸ್ ಪಡೆದು ಇದರಿಂದ ಅವರು ಹಣವನ್ನು ಗಳಿಸಬಹುದು ಎಂದಿದ್ದಾರೆ.
ನಿಖರ ಮಾಹಿತಿ ತಿಳಿಯಿರಿ
ಮೊಬೈಲ್ ಬಳಕೆದಾರರು ತಮ್ಮ ವಾಟ್ಸಾಪ್ ಮೂಲಕ /ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ತಿಳಿದಾಗ ಇದರ ಕುರಿತು ನಿಜಾಂಶವನ್ನು ಖಚಿತಪಡಿಸಿಕೊಳ್ಳಲು ಒಮ್ಮೆ ಟ್ವಿಟರ್/ಎಕ್ಸ್ ಖಾತೆಯನ್ನು ತೆರೆದು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವಾರ್ತಾ ಇಲಾಖೆಯ ಖಾತೆಯನ್ನು open ಮಾಡಿ ಇಲ್ಲಿ ಕಾಣಿಸುವ ವಾಟ್ಸಾಪ್ ನಂಬರ್ ಗೆ ಸಂದೇಶವನ್ನು ಕಳುಹಿಸಿ ಈ ಯೋಜನೆಯ ಕುರಿತು ಅಧಿಕೃತ ಮಾಹಿತಿಯನ್ನು ಪಡೆಯಿರಿ.
ಇತರೆ ವಿಷಯಗಳು
ಕರ್ನಾಟಕದಾದ್ಯಂತ ಹೆಚ್ಚಲಿದೆ ಶೀತ ಅಲೆ, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
Ujjwal 2.0 scheme: ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆಯಲು ಅರ್ಜಿ ಅಹ್ವಾನ